Sirikadalu

Sirikadalu
ಶ್ರೀದೇವಿ ಕೆರೆಮನೆ ಬರೆಹಗಳು

Tuesday 12 March 2024

ಹೇಳಿ ಹೋಗು



ಹೇಳಿ ಹೋಗು 

ನಿನ್ನನ್ನು ಮಾತನಾಡಿಸುವ 
ನನ್ನೆಲ್ಲ ತರೆಹವಾರಿ ಪ್ರಯತ್ನಗಳು
ಮಕಾಡೆ ಬಿದ್ದು ವಿಫಲವಾದ ನಂತರ 
ನಾನೂ ಸಹ ಮೌನವಾಗಿ 
ನಿನ್ನಿಂದ ದೂರ ಹೊರಟುಬಿಡುವ 
ಗಟ್ಟಿ ನಿರ್ಧಾರ ಮಾಡಿದ್ದೇನೆ

ಹೀಗೆ ಬಂದು ಹಾಗೆ ಹೋಗುವ
ನಿನ್ನ ಬಾಳ ಪಯಣದಲ್ಲಿ 
ಹೆಸರಿಲ್ಲದ ಒಂದು ಸಣ್ಣ 
ನಿಲ್ದಾಣ ನಾನಾಗಿದ್ದಕ್ಕೆ 
ಸಮಾಧಾನ ಪಡುವುದೋ 
ವಿಷಾದಿಸುವುದೋ ಎಂಬುದು
ಅರ್ಥವಾಗದೆ ದಿಗ್ಭ್ರಾಂತಳಾಗಿರುವಾಗ 
ಒಮ್ಮೆಯೂ ಹಿಂದಿರುಗಿ ನೋಡದೆ 
ನೀ ನಡೆದು ಹೋದ ಹಾದಿಯ 
ಬದಿಯ ಕಲ್ಲುಬಂಡೆಯಾಗಿದ್ದೇನೆ
ವಿದಾಯದ ಕಣ್ಣೀರನ್ನು ಒಳಗೊಳಗೇ ನುಂಗಿ

ಹೊರಟು ಹೋಗುವ ಮುನ್ನ 
ಒಂದೇ ಒಂದು ಮಾತು ಹೇಳಿ ಬಿಡು
ಅಲೆಗಳೇ ಇಲ್ಲದ ನನ್ನ ಬಾಳಲ್ಲಿ
ನೀನು ಬಂದು ತಂಪು ಸುರಿದಿದ್ದೇಕೆ
ಈಗ ಕಾರಣವೇ ಹೇಳದೆ 
ಹೊರಟು ಹೋಗುತ್ತಿರುವುದಾದರೂ ಏಕೆ?

...ಶ್ರೀದೇವಿ ಕೆರೆಮನೆ

7 comments:

  1. ಚೆನ್ನಾಗಿದೆ ಕವನ

    ReplyDelete
  2. ಚೆನ್ನಾಗಿದೆ

    ReplyDelete
  3. ಬಹಳ ಚೆನ್ನಾಗಿದೆ.

    ReplyDelete
  4. Superb 🎉👍😍🙏

    ReplyDelete
  5. Exallent poet ma

    ReplyDelete
  6. ಹೌದು ಬದುಕೆಂಬುದೆ ಹಾಗೆ. ಇರುವವರೆಗೆ ಮಾತಾಡುತ್ತಾ ಜೊತೆಯಿರುವ ನಾವು ಮರೆಯಾದಾಗ ಮೌನವೇ ಮಾತಾಗಿರುತ್ತದೆ. ಅದು ನೋವುಂಟು ಮಾಡಿದರೂ ಅದಕ್ಕೆ ಹೊಂದಿಕೊಂಡು ಸಮಾಧಾನಪಡಬೇಕು, ಅದುವೇ ಈ ಲೋಕದ ನಂಟು, ಶರಣಾರ್ಥಿ ಅಕ್ಕ.

    ReplyDelete
  7. ಅದ್ಭುತ ಕವನ. ಮನದಾಳದ ಮಾತು

    ReplyDelete