ಜೀವನದ ದ್ವಿಲಿಂಗ ಆಸಕ್ತಿಯನ್ನೇ ಸಾಹಿತ್ಯವನ್ನಾಗಿಸಿ ಗೆದ್ದ ಜೇನ್ ಬೌಲ್ಸ್
ಫೆಬ್ರವರಿ ೨೨, ೧೯೧೭ರಂದು ನ್ಯೂಯಾರ್ಕ್ ನಗರದಲ್ಲಿ ಯಹೂದಿ ಕುಟುಂಬದಲ್ಲಿ ಜನಿಸಿದ ಜೇನ್ ಅವರ ತಂದೆ ಸಿಡ್ನಿ ಔರ್ ಮತ್ತು ತಾಯಿ ಕ್ಲೇರ್ ಸ್ಟೇಜರ್. ಬಾಲ್ಯವನ್ನು ನ್ಯೂಯಾರ್ಕ್‌ನ ವುಡ್ಮೇರ್ನ್‌ನ ಲಾಂಗ್ ಐಲ್ಯಾಂಡ್‌ನಲ್ಲಿ ಕಳೆದ ಜೇನ್ ಹುಟ್ಟಿನಿಂದಲೇ ಮೊಣಕಾಲಿನಲ್ಲಿ ಸಮಸ್ಯೆಯನ್ನು ಹೊಂದಿದ್ದಳು. ನಂತರ ಹದಿಹರೆಯದಲ್ಲಿ ಒಮ್ಮೆ ಕುದುರೆಯಿಂದ ಬಿದ್ದಿದ್ದರಿಂದ ಮೊಣಕಾಲು ಮುರಿದುಹೋಯಿತು. ಮೊಣಕಾಲಿನ ಶಸ್ತ್ರಚಿಕಿತ್ಸೆಯ ನಂತರ ಅವರಿ ಕ್ಷಯ ಹಾಗೂ ಸಂಧಿವಾತ ಉಂಟಾಯಿತು. ಹೀಗಾಗಿ ಅವರ ತಾಯಿ ಚಿಕಿತ್ಸೆಗಾಗಿ ಸ್ವಿಟ್ಜರ್ಲೆಂಡ್‌ಗೆ ಕರೆದೊಯ್ದರು, ಅಲ್ಲಿ ಬೋರ್ಡಿಂಗ್ ಶಾಲೆಯಲ್ಲಿ ವಿದ್ಯಾಭ್ಯಾಸಮ ಮುಂದುವರೆಸಿದ ಜೇನ್ ನಂತರ ನ್ಯೂಯಾರ್ಕ್‌ನ ಜೂಲಿಯಾ ರಿಚ್ಮಂಡ್ ಹೈಸ್ಕೂಲ್ ಮತ್ತು ಮ್ಯಾಸಚೂಸೆಟ್ಸ್‌ನ ಗ್ರೀನ್ಫೀಲ್ಡ್‌ನಲ್ಲಿರುವ ಹುಡುಗಿಯರಿಗಾಗಿ ಸ್ಟೋನ್ಲೀಗ್ ಶಾಲೆಯಲ್ಲಿ ವ್ಯಾಸಂಗ ಮಾಡಿದರು.
ಬಾಲ್ಯದಿಂದಲೂ ಇದ್ದ ಮೊಣಕಾಲಿನ ತೊಂದರೆ ಹಾಗೂ ಮೊಣಕಾಲಿನ ಮುರಿತದಿಂದಾಗಿ ಜೀವನದಲ್ಲಿ ತೀವ್ರ ಅಭದ್ರತೆಯೊಂದಿಗೆ ಬಳಲಿದ ಜೇನ್ ಸಾಹಿತ್ಯದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರು. ನಾಯಿಗಳು, ಶಾರ್ಕ್‌ಗಳು, ಪರ್ವತಗಳು, ಕಾಡುಗಳು ಮತ್ತು ಎಲಿವೇಟರ್ಗಳ ಪಾರವಾದ ಭಯವನ್ನು ಬೆಳೆಸಿಕೊಂಡಿದ್ದ ಜೇನ್ ಜೀವಂತವಾಗಿ ಸುಟ್ಟು ಹೋಗುವ ಭಯವನ್ನು ಹೊಂದಿದ್ದರು. ೧೯೩೦ರ ದಶಕದ ಮಧ್ಯಭಾಗದಲ್ಲಿ ನ್ಯೂಯಾಕ್‌ಗೆ ಮರಳಿದ ನಂತರ ಗ್ರೀನ್ವಿಚ್ ವಿಲೇಜ್‌ಲ್ಲಿರುವ ಬೌದ್ಧಿಕ ಬೊಹೆಮಿಯಾದೆಡೆಗೆ ಆಕರ್ಷಿತರಾದರು.
ಜೇನ್ ಅಪಾರವಾದ ಶ್ರೀಮಂತ ಜೀವನ ಪ್ರೀತಿಯನ್ನು ಹೊಂದಿದ್ದರು. ೧೯೩೭ರಲ್ಲಿ ಎರಿಕಾ ಮಾನ್‌ರವರು ಜೇನ್‌ರವರಿಗೆ ಸಂಯೋಜಕ ಮತ್ತು ಬರಹಗಾರ ಪಾಲ್ ಬೌಲ್ಸ್ ಅವರನ್ನು ಪರಿಚಯಿಸಿದರು. ೧೯೩೮ರಲ್ಲಿ ಪಾಲ್ ಬೌಲ್ಸ್‌ರವರನ್ನು ವಿವಾಹವಾಗಿ ಜೇನ್ ಔರ್‌ನಿಂದ ಜೇನ್ ಬೌಲ್ಸ್ ಆದರು. ಮಧ್ಯ ಅಮೇರಿಕಾಕ್ಕೆ ಮಧುಚಂದ್ರಕ್ಕೆ ಹೋದರು. ಅವರು ಹೋಗಿದ್ದ ಮಧುಚಂದ್ರದ ಸ್ಥಳವು ಅವರ ಕಾದಂಬರಿ ಟು ಸೀರಿಯಸ್ ಲೇಡೀಸ್ಗೆ ಸ್ಫೂರ್ತಿ ನೀಡಿತು. ಪ್ಯಾರಿಸ್‌ನಲ್ಲಿ ಒಟ್ಟಿಗೆ ಪ್ರಯಾಣಿಸುವಾಗ ಲೆಸ್ಬಿಯನ್ ಬಾರ್‌ಗಳಿಗೆ ಭೇಟಿ ನಿಡುತ್ತಿದ್ದರು. ಮದುವೆಯ ನಂತರ ಸುಮಾರು ಒಂದೂವರೆ ವರ್ಷಗಳ ಕಾಲ ಅವರಿಬ್ಬರ ವೈವಾಹಿಕ ಜೀವನ ಸುಂದರವಾಗಿತ್ತಲ್ಲದೆ ಉತ್ತಮ ಲೈಂಗಿಕ ಜೀವನ ನಡೆಸಿದರು. ಆರಂಭಿಕ ವರ್ಷಗಳ ನಂತರ, ಜೇನ್ ಮತ್ತು ಪಾಲ್ ಪ್ಲಾಟೋನಿಕ್ ಸಹಚರರಾಗಿದ್ದರು. ಅವರಿಬ್ಬರೂ ದ್ವಿಲಿಂಗಿಗಳಾಗಿದ್ದರು. ಅದರಲ್ಲೂ ಮುಖ್ಯವಾಗಿ ಇಬ್ಬರೂ ತಮ್ಮ ಮದುವೆಯ ಹೊರಗೆ ಲೈಂಗಿಕತೆಯನ್ನು ಪಡೆಯಲು ಆದ್ಯತೆ ನೀಡಿದರು.
ನಂತರ ಜೇನ್ ಮತ್ತು ಪಾಲ್ ಮೆಕ್ಸಿಕೋಗೆ ಹೋದಾಗ ಅಲ್ಲಿ ಜೇನ್ ಹೆಲ್ವೆಟಿಯಾ ಪರ್ಕಿನ್ಸ್ ಅವರನ್ನು ಭೇಟಿಯಾದರು, ಅವರಿಬ್ಬರೂ ಲೆಸ್ಬಿಯನ್ ಪ್ರೇಮಿಗಳಾಗಿದ್ದರೆಂದು ಅವರ ಜೀವನ ಚರಿತ್ರೆಕಾರರು ಉಲ್ಲೇಖಿಸಿದ್ದಾರೆ.
೧೯೪೩ ರಲ್ಲಿ, ಅವರ ಕಾದಂಬರಿ ಟು ಸೀರಿಯಸ್ ಲೇಡೀಸ್ ಪ್ರಕಟವಾಯಿತು. ಟೂ ಸಿರಿಯಸ್ ಲೇಡಿಸ್ ಕೃತಿಯು ಇಬ್ಬರು ಮಹಿಳೆಯರ ಕುರಿತಾದ ಕೃತಿ. ಒಬ್ಬಳು ಕೆಟ್ಟ ಕೆಲಸ ಮಾಡುವ ಹಾಗೂ ಕ್ರೂರಿಯಾದರೆ ಇನ್ನೊಬ್ಬಳು ಸದ್ಗುಣ ಸಂಪನ್ನೆ. ಜೀವನದಲ್ಲಿ ಕೇವಲ ಎರಡು ಸಲ ಭೇಟಿಯಾಗಿರುವ ಈ ಇಬ್ಬರು ಮಹಿಳೆಯರ ಕಥೆಗಳು ಇಬ್ಬರ ಜೀವನ ಪ್ರತ್ಯೇಕವಾಗಿಯೇ ಮುಂದುವರೆಯುವ ಈ ಸಂಕಲನ ಅದರ ನಿರೂಪಣೆಗಾಗಿ ಹೊಗಳಿಸಿ ಕೊಂಡಿದೆ. ದಿ ಲೋಬ್ಸ್ಟರ್ ಬೌಲ್ ಎಂಬ ರೆಸ್ಟೋರೆಂಟ್ನಲ್ಲಿ ಸಂಭವಿಸುತ್ತದೆ. ಇಲ್ಲಿ ಲೇಖಕಿ ಆಹಾರವನ್ನು ರೂಪಕ ಚಿತ್ರಣವನ್ನಾಗಿ ಬಳಸಿದ್ದಾರೆ. ಬೌಲ್ಸ್ ತಮ್ಮ ತಾಯಿಯೊಂದಿಗೆ ಹೊಂದಿದ್ದ ಸಂಕೀರ್ಣ ಸಂಬಂಧವು ಈ ಕಥಾವಸ್ತುವಿಗೆ ಸ್ಫೂರ್ತಿಯಾಗಿರಬಹುದು ಎಂದು ಜೀವನಚರಿತ್ರೆಕಾರರು ಅಭಿಪ್ರಾಯ ಪಟ್ಟಿದ್ದಾರೆ.
೧೯೪೭ರವರೆಗೆ ಜೇನ್ ನ್ಯೂಯಾರ್ಕ್‌ನಲ್ಲಿ ವಾಸಿಸುತ್ತಿದ್ದರೆ ಪಾಲ್ ಮೊರಾಕೊದ ಟ್ಯಾಂಜಿಯರ್‌ಗೆ ತೆರಳಿದರು ; ಜೇನ್ ೧೯೪೮ರಲ್ಲಿ ಪೌಲ್‌ರವರನ್ನು ಸೇರಿಕೊಂಡರು. ಮೊರಾಕೊದಲ್ಲಿದ್ದಾಗ, ಜೇನ್ ಚೆರಿಫಾ ಎಂಬ ಮೊರೊಕನ್ ಮಹಿಳೆಯೊಂದಿಗೆ ತೀವ್ರವಾದ ಮತ್ತು ಸಂಕೀರ್ಣವಾದ ಸಂಬಂಧವನ್ನು ಹೊಂದಿದ್ದರು. ಅವರು ಟಾರ್ಚ್ ಗಾಯಕ ಲಿಬ್ಬಿ ಹಾಲ್ಮನ್‌ರೊಂದಿಗೂ ನಿಕಟ ಸಂಬಂಧವನ್ನು ಹೊಂದಿದ್ದರು, ವಿಚಿತ್ರವೆಂದರೆ ಲಿಬ್ಬಿ ಹಾಲ್ಮನ್ ರವರು ಜೇನ್ ಮತ್ತು ಪಾಲ್ ಇಬ್ಬರ ಕಡೆಗೂ ಆಕರ್ಷಿತರಾಗಿದ್ದರು, ಆದರೆ ಪಾಲ್ ಈ ಸಂಬಂಧದ ಬಗ್ಗೆ ಹೆಚ್ಚೇನೂ ಆಸಕ್ತಿ ಹೊಂದಿರದ ಕಾರಣ ಪ್ರತಿಕ್ರಿಯಿಸಲಿಲ್ಲ.
ಜೇನ್ ಬೌಲ್ಸ್ ೧೯೫೩ರಲ್ಲಿ ಸಮ್ಮರ್ ಹೌಸ್ ನಾಟಕವನ್ನು ಬರೆದರು. ಇದು ಬ್ರಾಡ್ವೇನಲ್ಲಿ ಪ್ರದರ್ಶನಗೊಂಡಿತು. ಟೆನ್ನೆಸ್ಸೀ ವಿಲಿಯಮ್ಸ್ , ಟ್ರೂಮನ್ ಕಾಪೋಟ್ ಮತ್ತು ಜಾನ್ ಆಶ್ಬೆರಿ ಮುಂತಾದ ಬಹಳಷ್ಟು ಖ್ಯಾತನಾಮ ಬರಹಗಾರರು ಇವರ ಸಾಹಿತ್ಯಿಕ ಅಭಿವ್ಯಕ್ತಿಯನ್ನು ತುಂಬು ಮನಸ್ಸಿನಿಂದ ಹೊಗಳಿದರು.
ಜೇನ್ ಬೌಲ್ಸ್ ೧೯೫೩ರಲ್ಲಿ ಸಮ್ಮರ್ ಹೌಸ್ ನಾಟಕವನ್ನು ಬರೆದರು. ಇದು ಬ್ರಾಡ್ವೇನಲ್ಲಿ ಪ್ರದರ್ಶನಗೊಂಡಿತು. ಟೆನ್ನೆಸ್ಸೀ ವಿಲಿಯಮ್ಸ್ , ಟ್ರೂಮನ್ ಕಾಪೋಟ್ ಮತ್ತು ಜಾನ್ ಆಶ್ಬೆರಿ ಮುಂತಾದ ಬಹಳಷ್ಟು ಖ್ಯಾತನಾಮ ಬರಹಗಾರರು ಇವರ ಸಾಹಿತ್ಯಿಕ ಅಭಿವ್ಯಕ್ತಿಯನ್ನು ತುಂಬು ಮನಸ್ಸಿನಿಂದ ಹೊಗಳಿದರು.
ವಿಲಕ್ಷಣವಾದ ಕಥಾವಸ್ತು ಹೊಂದಿರುವ ಈ ನಾಟಕವು ಅತಿಯಾಗಿ ಆಡುವ ತಾಯಿ ಮತ್ತು ಸೌಮ್ಯ ಮಗಳು ಮತ್ತು ಸೌಮ್ಯವಾದ ತಾಯಿ ಮತ್ತು ಅತಿಯಾಗಿ ವರ್ತಿಸುವ ಮಗಳ ಹೋಲಿಕೆಯಾಗಿದೆ. ಕಥಾವಸ್ತುವು ಪಾತ್ರದ ಪರಸ್ಪರ ಸಂಭಾಷಣೆಯಿಂದ ಮುಂದುವರೆಯುತ್ತದೆ ಹೊರತು ಕ್ರಿಯೆಯಿಂದಲ್ಲ. ನಾಟಕವು ಓ ಎಸ್. ಗೆರ್ಟುಡ್ ಈಸ್ಟ್ಮನ್ ಕ್ಯುವಾಸ್ ಅವರ ಸ್ವಗತದೊಂದಿಗೆ ಪ್ರಾರಂಭವಾಗುತ್ತದೆ, ದಕ್ಷಿಣ ಕ್ಯಾಲಿಫೋರ್ನಿಯಾದ ಓರ್ವ ವಿಧವೆ ಶ್ರೀಮಂತ ಮೆಕ್ಸಿಕನ್ ಒಬ್ಬನನ್ನು ಮದುವೆಯಾಗುತ್ತಾಳೆ. ಆತ ಹಾಡು ಮತ್ತು ನೃತ್ಯದ ಒಡನಾಡಿಯಾಗಿದ್ದವನಾದರೂ ಆ ಶ್ರೀಮಂತ ವಿಧವೆಯ ಮಗಳ ಮೇಲೆ ದಬ್ಬಾಳಿಕೆ ನಡೆಸುತ್ತಾನೆ. ಹೀಗಾಗಿ ವಿಧವೆ ಶ್ರೀಮತಿ ಕಾನ್ಸ್ಟೇಬಲ್ ಮತ್ತು ಅವಳ ದೈಹಿಕ ಅಸಾಮರ್ಥ್ಯ ಮಗಳು ಇಬ್ಬರೂ ಅಸ್ಥಿರ ಭಾವನೆ ಅನುಭವಿಸುವ ಕಥಾನಕವನ್ನು ಇದು ಹೊಂದಿದೆ. ಮಿಸ್ ಕ್ಯುವಾಸ್ ಒಬ್ಬ ಸೂಟರ್ ಅನ್ನು ಹೊಂದಿದ್ದರೂ ಅದು ಅವಳ ತಾಯಿಗೆ ಹೆಚ್ಚು ಕಾಡುತ್ತಿರವಹುದೆಂದು ಅವಳು ಭಾವಿಸುತ್ತಾಳೆ. ಹೀಗಾಗಿ ಇದು ಮೊದಲು ಹೇಳಿದ ಒ ಎಸ್. ಕ್ಯುವಾಸ್ ಮತ್ತು ಅವರ ಹೊಸ ಪತಿ ಮೌನವಾಗಿ ಪತ್ರಿಕೆ ಓದುವುದರ ಮುಖಾಂತರ ಅವರ ಕಾರ್‍ಯವನ್ನು ಮುಚ್ಚಿ ಹಾಕುವಂತೆ ಚಿತ್ರಿಸಲಾಗಿದೆ.
ಸಮ್ಮರ್ ಹೌಸ್ನಲ್ಲಿ ಅವರ ಏಕೈಕ ಪೂರ್ಣ ಪ್ರಮಾಣದ ಹಾಗೂ ದೀರ್ಘಾವಧಿಯ ನಾಟಕವಾಗಿತ್ತು. ಇದನ್ನು ಮೊದಲು ೧೯೫೧ರಲ್ಲಿ ಪೆನ್ಸಿಲ್ವೇನಿಯಾದ ಮೊಯ್ಲಾನ್‌ನಲ್ಲಿರುವ ಹೆಡ್ಗೆರೋ ಥಿಯೇಟರ್‌ನಲ್ಲಿ ಪ್ರದರ್ಶಿಸಲಾಗಿತ್ತು. ನಾಟಕವು ಪಾಲ್ ಬೌಲ್ಸ್ ಅವರ ಸಂಗೀತದೊಂದಿಗೆ ೨೯ ಡಿಸೆಂಬರ್ ೧೯೫೩ರಂದು ಬ್ರಾಡ್ವೇ ದಿ ಪ್ಲೇಹೌಸ್ ಥಿಯೇಟರ್‌ನಲ್ಲಿ ಪ್ರದರ್ಶನ ಗೊಂಡಿತು. ಅಲ್ಲಿ ಅದು ಮಿಶ್ರ ವಿಮರ್ಶೆಗಳೊಂದಿಗೆ ಮತ್ತು ಕಡಿಮೆ ಪ್ರೇಕ್ಷಕರೊಂದಿಗೆ ಎರಡು ತಿಂಗಳ ಕಾಲ ನಡೆಯಿತು. ೧೯೬೩ರ ಸುಮಾರಿಗೆ, ನಾಟಕವನ್ನು ಪುನರುಜ್ಜೀವನಗೊಳಿಸಲಾಯಿತು. ನಾಟಕವು ೧೯೯೩ರಲ್ಲಿ ವಿವಿಯನ್ ಬ್ಯೂಮಾಂಟ್ ಥಿಯೇಟರ್‌ನಲ್ಲಿ ಫಿಲಿಪ್ ಗ್ಲಾಸ್‌ರವರ ಪ್ರಾಸಂಗಿಕ ಸಂಗೀತದೊಂದಿಗೆ ಪುನಃ ಪ್ರದರ್ಶನ ಕಂಡಿತು. ಈ ಪುನರುಜ್ಜೀವನವು ನಾಟಕದ ಅತ್ಯುತ್ತಮ ನಿರ್ದೇಶಕ, ರಂಗಸಜ್ಜಿಕೆ ಮತ್ತು ಪೋಷಕ ನಟಿಗಾಗಿ ೧೯೯೪ ರ ಡ್ರಾಮಾ ಡೆಸ್ಕ್ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳನ್ನು ಪಡೆಯಿತು.
ಒಟ್ಟೂ ಏಳು ಕಥಾ ಸಂಕಲನ ಪ್ರಕಟಿಸಿರುವ ಜೇನ್ ಬರಹಗಳಿಗೆ ಅವರ ಜೀವನವೇ ಸ್ಪೂರ್ತಿ. ಅವರ ಕಲೆಕ್ಟೆಡ್ ವರ್ಕ್ಸ್ ಅನ್ನು 1966ರಲ್ಲಿ ಪ್ರಕಟಿಸಲಾಯಿತು. ಅವರ ಮರಣದ ನಂತರ ಅದನ್ನು ವಿಸ್ತರಿಸಿ ಮೈ ಸಿಸ್ಟರ್ಸ್ ಹ್ಯಾಂಡ್ ಇನ್ ಮೈನ್ (1978) ಎಂದು ಪ್ರಕಟಿಸಲಾಯಿತು.
ತೀವ್ರ ಮದ್ಯವ್ಯಸನಿಯಾಗಿದ್ದ ಬೌಲ್ಸ್, ೧೯೫೭ರಲ್ಲಿ ತಮ್ಮ ೪೦ನೇ ವಯಸ್ಸಿನಲ್ಲಿ ಪಾರ್ಶ್ವವಾಯುವಿಗೆ ಒಳಗಾದರು. ಪಾರ್ಶ್ವವಾಯು ಅವರ ದೃಷ್ಟಿ ಮತ್ತು ಮಾನಸಿಕ ಸಾಮರ್ಥ್ಯದ ಮೇಲೆ ಪರಿಣಾಮ ಬೀರಿತು, ಆದರೆ ಅವರು ತಮ್ಮ ಆರೋಗ್ಯ ಸಮಸ್ಯೆಗಳನ್ನು ತಳ್ಳಿಹಾಕಿ ಬರೆಯುವುದನ್ನು ಮುಂದುವರೆಸಿದರು. ಇಂಗ್ಲೆಂಡ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಈ ಕಾಯಿಲೆಗೆ ವಿವಿಧ ಚಿಕಿತ್ಸೆಗಳನ್ನು ಪಡೆದುಕೊಂಡರಾದರೂ ಇದರ ಹೊರತಾಗಿಯೂ ಅವರ ಆರೋಗ್ಯ ಕ್ಷೀಣಿಸುತ್ತಲೇ ಇತ್ತು,ನಂತರ ಕೊನೆಯಲ್ಲಿ ಅವರನ್ನು ಸ್ಪೇನ್‌ನ ಮಲಗಾದಲ್ಲಿನ ಚಿಕಿತ್ಸಾಲಯಕ್ಕೆ ಸೇರಿಸಲಾಯಿತು. ಅಲ್ಲಿ ಅವರು ೧೯೭೩ರಲ್ಲಿ ತಮ್ಮ ೫೬ನೇ ವಯಸ್ಸಿನಲ್ಲಿ ನಿಧನರಾದರು.
ಪಾಲ್ ಬೌಲ್ಸ್‌ರವರ ಅರೆ-ಆತ್ಮಚರಿತ್ರೆ ಆಧರಿಸಿದ ಕಾದಂಬರಿ ದಿ ಶೆಲ್ಟರಿಂಗ್ ಸ್ಕೈನಲ್ಲಿ , ಪೋರ್ಟ್ ಮತ್ತು ಕಿಟ್ ಮೊರೆಸ್ಬಿ ಪಾತ್ರಗಳು ಪಾಲ್ ಬೌಲ್ಸ್ ಮತ್ತು ಅವರ ಹೆಂಡತಿ ಜೇನ್ ಬೌಲ್ಸ್‌ರವರನ್ನು ಆಧರಿಸಿವೆ. ಕಾದಂಬರಿಯು ಚಲನಚಿತ್ರವಾದಾಗ ಜೇನ್ ಪಾತ್ರವನ್ನು ಡೆಬ್ರಾ ವಿಂಗರ್ ಕಿಟ್ ನಿರ್ವಹಿಸಿದರು.
ಸಾಂಸಾರಿಕ ಜೀವನದಲ್ಲಿದ್ದೂ ಗಂಡ ಹೆಂಡತಿ ಇಬ್ಬರೂ ದ್ವಿಲಿಂಗಿಗಳಾಗಿ ಹೊರಗಿನವರೊಂದಿಗೆ ಸಂಬಂಧ ಬೆಳೆಸಲು ಉತ್ಸುಕರಾಗಿದ್ದಾಗಿಯೂ ತಮ್ಮ ವೈವಾಹಿಕ ಸಂಬಂಧವನ್ನು ಕೊನೆಯವರೆಗೂ ಕಾಪಾಡಿಕೊಂಡ ವಿಲಕ್ಷಣ ಸಾಹಿತ್ಯಿಕ ದಂಪತಿಗಳಾಗಿ ಇವರಿಬ್ಬರೂ ಸದಾ ಸಾಹಿತ್ಯ ಪ್ರೇಮಿಗಳಲ್ಲಿ ನೆನಪಿನಲ್ಲಿ ಉಳಿಯುತ್ತಾರೆ. ತಮ್ಮದೇ ವೈಯಕ್ತಿಕ ಜೀವನದ ಅನುಭವಗಳನ್ನು ಕಾದಂಬರಿ ನಾಟಕಗಳ ಮುಖಾಂತರ ಓದುಗರಿಗೆ ಕಟ್ಟಿಕೊಟ್ಟು ದಟ್ಟವಾದ ಅನುಭವವನ್ನು ಉಣಬಡಿಸಿದ ಖ್ಯಾತಿ ಜೇನ್ ಹೆಸರಿಗಿದೆ.
https://lokadhwani.com/ArticlePage/APpage.php?edn=Main&articleid=LOKWNI_MAI_20221111_4_6
ಪಾಲ್ ಬೌಲ್ಸ್‌ರವರ ಅರೆ-ಆತ್ಮಚರಿತ್ರೆ ಆಧರಿಸಿದ ಕಾದಂಬರಿ ದಿ ಶೆಲ್ಟರಿಂಗ್ ಸ್ಕೈನಲ್ಲಿ , ಪೋರ್ಟ್ ಮತ್ತು ಕಿಟ್ ಮೊರೆಸ್ಬಿ ಪಾತ್ರಗಳು ಪಾಲ್ ಬೌಲ್ಸ್ ಮತ್ತು ಅವರ ಹೆಂಡತಿ ಜೇನ್ ಬೌಲ್ಸ್‌ರವರನ್ನು ಆಧರಿಸಿವೆ. ಕಾದಂಬರಿಯು ಚಲನಚಿತ್ರವಾದಾಗ ಜೇನ್ ಪಾತ್ರವನ್ನು ಡೆಬ್ರಾ ವಿಂಗರ್ ಕಿಟ್ ನಿರ್ವಹಿಸಿದರು.
ಸಾಂಸಾರಿಕ ಜೀವನದಲ್ಲಿದ್ದೂ ಗಂಡ ಹೆಂಡತಿ ಇಬ್ಬರೂ ದ್ವಿಲಿಂಗಿಗಳಾಗಿ ಹೊರಗಿನವರೊಂದಿಗೆ ಸಂಬಂಧ ಬೆಳೆಸಲು ಉತ್ಸುಕರಾಗಿದ್ದಾಗಿಯೂ ತಮ್ಮ ವೈವಾಹಿಕ ಸಂಬಂಧವನ್ನು ಕೊನೆಯವರೆಗೂ ಕಾಪಾಡಿಕೊಂಡ ವಿಲಕ್ಷಣ ಸಾಹಿತ್ಯಿಕ ದಂಪತಿಗಳಾಗಿ ಇವರಿಬ್ಬರೂ ಸದಾ ಸಾಹಿತ್ಯ ಪ್ರೇಮಿಗಳಲ್ಲಿ ನೆನಪಿನಲ್ಲಿ ಉಳಿಯುತ್ತಾರೆ. ತಮ್ಮದೇ ವೈಯಕ್ತಿಕ ಜೀವನದ ಅನುಭವಗಳನ್ನು ಕಾದಂಬರಿ ನಾಟಕಗಳ ಮುಖಾಂತರ ಓದುಗರಿಗೆ ಕಟ್ಟಿಕೊಟ್ಟು ದಟ್ಟವಾದ ಅನುಭವವನ್ನು ಉಣಬಡಿಸಿದ ಖ್ಯಾತಿ ಜೇನ್ ಹೆಸರಿಗಿದೆ.
https://lokadhwani.com/ArticlePage/APpage.php?edn=Main&articleid=LOKWNI_MAI_20221111_4_6
Very nice mam
ReplyDelete