*ಬಿಸಿ ಚಹಾ*
ಎಲ್ಲವನ್ನೂ ಬಿಡಿಸಿ ಹೇಳುವುದರಲ್ಲಿ
ಏನಿದೆ ಸೊಗಸು
ಹೇಳದೇ ಅರ್ಥೈಸಿ ಕೊಂಡರೆ ಮಾತ್ರ
ಅದರಲ್ಲಿದೆ ಸೊಬಗು
ಎಲ್ಲವನ್ನೂ ಮನಬಿಚ್ಚಿ
ಹೇಳಲಾಗದ ಚಡಪಡಿಕೆಗೆಂದೇ
ಹಾಲು ಸಕ್ಕರೆ ಬೆರೆಸಿ
ಬಿಸಿ ಬಿಸಿ ಚಹಾ ಕೈಗಿಟ್ಟಿದ್ದೇನೆ
ಅದರ ಸ್ವಾದವ ಆಸ್ವಾದಿಸುವ
ಸವಿ ಸಮಯದಲ್ಲಾದರೂ
ಅರ್ಥವಾದರೆ ಸಾಕು ನಿನಗೆ
ನಾನು ಉಸುರದೇ ಹೋದ
ಮನದೊಳಗಿನ ಕನವರಿಕೆ
.
.
.. ಸಿರಿ 🌞 (14/12/2016)
ಶುಭ ಮುಂಜಾವು
ಚಹದ ಜೊತೆ ಸಿರಿ ನಿಮ್ಮ ಕವಿತೆ...
ReplyDeleteಇಹವ ನಾ ಮರೆತು ಕುಳಿತೆ...