ನನಗೂ ಕೊಡು ಮದಿರೆ
ಗೊತ್ತು ನನಗೆ ಮದಿರೆಯೆಂದರೆ
ಬಲು ಇಷ್ಟವೆಂದು ನಿನಗೆ
ಹೊಸತೊಂದು ಅಂಗಿ ಖರೀದಿಸಿದ ಖುಷಿಗೆ
ಹಳೆಯ ಕಡತವೊಂದು
ಯಾವ ಸುಂಕವನ್ನೂ ಬೇಡದೆ
ವಿಲೇವಾರಿಯಾದ ನಿರಾಳತೆಗೆ
ಉಳುಕಿದ ಕಾಲಿನ ನೋವಿಗೆ
ಸರಿಯದ ಸಮಯವ
ಬಲವಂತದಿಂದ ನೂಕುವ ಪರಿಗೆ
ಜೀವ ಎಂದುಕೊಂಡಾಕೆ
ಮರುಮಾತನಾಡದೆ ದೂರವಾಗಿ
ಒಡೆದುಹೋದ ಧಮನಿ
ಮತ್ತೆ ಮತ್ತೆ ಮಿಡುಕುವ ನೆನಪಿಗೆ
ಎಲ್ಲದಕ್ಕೂ ಅದೊಂದೇ ನಿನಗಿರುವ ಪರಿಹಾರ
ಇಂದು, ನಾಳೆ ಇಲ್ಲ ಎನ್ನುತ್ತಲೆ
ಅರಿವಾಗದಂತೆ ನಿನ್ನ ಕಾಲು
ಮದಿರಾಲಯಕ್ಕೆ ಎಳೆಯುವುದನ್ನು
ನಿನ್ನರವಿಗೆ ಬಾರದಂತೆ
ಅಸಹಾಯಕಳಾಗಿ ನೋಡುತ್ತ
ಎದೆಯೊಳಗಿನ ನಿಟ್ಟುಸಿರು
ತುಟಿಯಂಚಲ್ಲಿ ಹೊರಸೂಸದಂತೆ ತಡೆವಾಗ
ಮಣಭಾರದ ಕಲ್ಲು
ಇರು,
ಕಳೆದುಕೊಂಡ ಹಳೆ ಹುಡುಗಿಯ ನೆನಪನ್ನು
ಒಂದು ಲೋಟ ಮದಿರೆ ಮರೆಸುತ್ತದೆಂದಾರೆ
ನನಗೂ ಕೊಟ್ಟುಬಿಡು
ಒಂದು ಮಡಕೆ ಪೂರ್ತಿ
ಎದುರಿಗಿದ್ದೂ ನಿನ್ನ ಮನವ ಒಲಿಸಿಕೊಂಡು
ಹಳೆಯ ಒಲವನ್ನು ಮರೆಸಲಾಗದ
ನನ್ನ ಅಶಕ್ತತೆಯನ್ನು ಮರೆಯಲು
ಶ್ರೀದೇವಿ ಕೆರೆಮನೆ
Madireya nashakinta nimma kavanada nashe chennagide.
ReplyDeleteKaledukonda hudagiyannu mareyisi ,hendatiyalli nasheyannu hudukuva shakti nimma kavanadallide.
Aadaru nimma chahadalliruva kavanada nashe nimma Eee madareyadalli bandilla.
ReplyDeleteParavailla chahadalliye iddare hege madireyu beku...
ನನಗೂ ಕೊಡು ಮದಿರೆ - ಕವನ
ReplyDeleteಕುಡಿಯಲು ಕಂಠಪೂರ್ತಿ - ಇನ್ನೊಂದು ನೆವನ